Yellow wagtail
ಬಣ್ಣದ ಗುಬ್ಬಿ ಉಬ್ಬಿ ಉಬ್ಬಿ
ಎಲ್ಲಿವರೆಗೆ ನಿನ್ನ ನೆಡಿಗೆ
ಊರಿನಿಂದ ಊರಿಗೆ
ವಲಸೆ ಬಂದೆ ಉಸುಕಿನ ನಗರಿಗೆ
ಏನು ಸಿಕ್ಕಿತು ನಿನಗೆ
ಕಣ್ಣ ಅರಳಿಸಿ ಹಾಗೆ ನೋಡುತಿರುವೆ....
ಕಡಲ ದಾಟಿ ಹಾರಿ ಬಂದೆ
ಕಾಳು ಕಡ್ಡಿ ಹುಡುಕ ನಿಂತೆ
ಏಕೆ ಹೀಗೆ ದೂರದಿಂದ ಬಂದೆ
ನಿನ್ನ ನಾಡಲಿ ಇಷ್ಟು ದಿನ ಏನು ತಿಂದೆ....
ಇರಲಿ ನಿನಗೆ ಸ್ವಲ್ಪ ಎಚ್ಚರ
ಉಸುಕಿನ ನಗರಿ ಪಕ್ಷಿಬಳಗ ಇಟ್ಟಾರು ಮಚ್ಚರ....
ಅತ್ತಲಿತ್ತ ನೋಡಿ ಹೆಚ್ಚೆ ಇಡು
ಊರಿಗೆ ಹೊಸಬನೆಂದು ತೋರಿಸಿಕೊಳ್ಳದಿರು...
--
ಮಾತು ಕಲಿತ ಕತ್ತಲು
ಬೆಳಕಿನ ಒಡವೆಗೆ
ರಾತ್ರಿಗಳನೇ ನೀಡಿದೆ.......
-ಸುಗುಣ ಮಹೇಶ್
No comments:
Post a Comment